ವಿಸ್ಮಯ ಮಾಧ್ಯಮ ಪತ್ರಿಕೆಗೆ ಹಾಗೂ ಆನ್ಲೈನ್ ವೆಬ್ಸೈಟ್ನಲ್ಲಿ ಜಾಹೀರಾತು ಪ್ರಕಟಿಸಲು ಸಂಪರ್ಕಿಸಿ: 9535331181, 7795260455

*ನಿವೇಶನ ಹೊಂದಿರುವವರಿಗೆ ಸ್ವಂತ ಮನೆಯನ್ನು ನಿರ್ಮಿಸಿಕೊಡಲಾಗುವುದು – ಶಾಸಕ ವಿ.ಮುನಿಯಪ್ಪ*

ಶಿಡ್ಲಘಟ್ಟ :ನಗರದ ೧೭ನೇ ವಾರ್ಡಿನ ರಹಮತ್ ನಗರದಲ್ಲಿ ನಗರಸಭೆ ಹಾಗೂ ಕೊಳಚೆ ಪ್ರದೇಶ ಅಭಿವೃದ್ದಿ ಮಂಡಳಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಲ್ಲರಿಗೂ ಸೂರು ಯೋಜನೆಯಡಿ ನಿವೇಶನ ಹೊಂದಿರುವ, ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡಲು ನಿವೇಶನ ಹಸ್ತಾಂತರ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.ನಗರ ವ್ಯಾಪ್ತಿಯಲ್ಲಿ ಮನೆ ಇಲ್ಲದೆ ನಿವೇಶನ ಹೊಂದಿರುವವರಿಗೆ ಸ್ವಂತ ಮನೆಯನ್ನು ನಿರ್ಮಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.ನಗರದಲ್ಲಿ ಮೊದಲ ಹಂತದಲ್ಲಿ ೫೦೦ ಮಂದಿ ಮನೆ ಇಲ್ಲದ ನಿವೇಶನ ಹೊಂದಿರುವವರಿಗೆ, ಪ್ರತಿಯೊಬ್ಬರಿಗೂ ೪.೬ ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು. ನಂತರದ ಅವಧಿಯಲ್ಲಿ ಉಳಿದ ಎಲ್ಲರಿಗೂ ಮನೆಗಳನ್ನು ಕಟ್ಟಿ ಕೊಡಲಾಗುವುದು ಎಂದರು.ಮನೆ ಪಡೆಯುವ ಫಲಾನುಭವಿಗಳಲ್ಲಿ ಸಾಮಾನ್ಯ ವರ್ಗದವರು ಶೇ ೧೫ರಷ್ಟು, ಪರಿಶಿಷ್ಟ ಜಾತಿ ಪಂಗಡದವರು ಶೇ ೧೦ರಷ್ಟು ವಂತಿಗೆಯನ್ನು ಪಾವತಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ೧.೫ ಲಕ್ಷ ರೂ ಹಣ ನೀಡಿದರೆ ಇನ್ನುಳಿದ ಹಣವನ್ನು ರಾಜ್ಯ ಸರ್ಕಾರ ಹೊಂದಿಸಲಿದೆ ಎಂದು ಹೇಳಿದರು.ನಗರದ ಹೊರವಲಯದಲ್ಲಿ ಈಗಾಗಲೆ ೨೫ ಎಕರೆ ಜಮೀನನ್ನು ಖರೀಸಿದ್ದು, ಇನ್ನೂ ೧೫ ಎಕರೆಯಷ್ಟು ಜಮೀನನ್ನು ಖರೀದಿಸಿ ನಿವೇಶನ ಹಂಚಲಾಗುವುದು. ಇದರಿಂದ ಎಲ್ಲರೂ ಸ್ವಂತ ಮನೆ ಹೊಂದಿ ಇತರರಂತೆ ಸ್ವಾಭಿಮಾನದ ಬದುಕು ನಡೆಸಲು ಸಾಧ್ಯವಾಗಲಿದೆ ಎಂದರು.ಈ ಸಂದರ್ಭದಲ್ಲಿ ೧೭ನೇ ವಾರ್ಡಿನ ಹಲವರಿಗೆ ಮನೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.ಕೊಳಚೆ ನಿರ್ಮೂಲನಾ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ಹನುಮಂತರೆಡ್ಡಿ, ನಗರಸಭೆ ಪೌರಾಯುಕ್ತ ಚಲಪತಿ, ನಗರಸಭೆ ಸದಸ್ಯರಾದ ಮುಷ್ಠರಿತನ್ವೀರ್, ಚಿಕ್ಕಮುನಿಯಪ್ಪ, ಬಾಲಕೃಷ್ಣ ಹಾಜರಿದ್ದರು.Attachments are

ಅನಾವರಣ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಮನದಾಳದ ಮಾತು

ಹೈ,ಕ,ಪದವೀಧರ ಶಿಕ್ಷಕರ ಉದ್ಯೋಗ ವಂಚನೆ ಬೆಳಗಾವಿ ಚಲೋ

ಬಳ್ಳಾರಿ ಹೈದ್ರಾಬಾದ್ ಕರ್ನಾಟಕ ಭಾಗದ ಪ್ರದೇಶದಲ್ಲಿ೨೦೧೭ ರ ನೇಮಕಾತಿಯಲ್ಲಿ ಸುಮಾರು ೪,೦೦೦ ಸಾವಿರ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆದು ಅದರಲ್ಲಿ ಸರ್ಕಾರ ಇಂಗ್ಲಿಷ್ ಭಾಷಾ ವಿಜ್ಞಾನ ಮತ್ತು ಗಣಿತ ವಿಷಯ ಶಿಕ್ಷಕರ ಹುದ್ದೆಗಳ ನೇಮಕಾತಿ ಹೊಂದಲು ಇರುವ ಕಠಿಣ ನಿಯಮಗಳಿಂದ ಕೇವಲ ೩೩೫ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಲು ಸಫಲವಾಯಿತು, ಇದಕ್ಕೆ ಕಾರಣ ಟಿ ಇ ಟಿ ಅರ್ಹತಾ ಪರೀಕ್ಷೆ ಪಾಸಾದವರ ಸಂಖ್ಯೆ ಅಧಿಸೂಚಿಸಿದ ಹುದ್ದೆಗಳ ಸಂಖ್ಯೆಗಿಂತ ಕಡಿಮೆ ಇದೆ,ಆದರೆ ತಿದ್ದುಪಡಿ ಅನುಸಾರ ಪೇಪರ್೨ ರಲ್ಲಿ೫೦ ಅಂಕ ಪೇಪರ್೩ ರಲ್ಲಿ ಶೇಕಡಾ ೬೦ ರಷ್ಟು ಅಂಕ ಮಾಡಿ ನಂತರ ಸಿಇಟಿ ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳನ್ನು ಗಳಿಸಲೇಬೇಕೆಂಬ ನಿಯಮದಿಂದ ಎಲ್ಲಾ ಹುದ್ದೆಗಳು ತುಂಬಲು ಅರ್ಹ ಅಭ್ಯರ್ಥಿಗಳ ಕೊರತೆ ಕಂಡು ಬಂತು, ಎಂದು ಟಿ ಜಿ ವಿಠ್ಠಲ ರವರ ನೇತೃತ್ವದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಮ್ಮ ಆಕ್ರೋಶ ವನ್ನು ಹೊರ ಹಾಕಿದರು ನಗರದ ಮಯೂರ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ಮುಖಾಂತರ ಮಾತನಾಡಿದ ಅವರು ೨೦೧೭ ರ ಹಿಂದೆ ಕನಿಷ್ಠ ೬೦ ಅಂಕಗಳು ಸಿ ಇ ಟಿ ಯಲ್ಲಿ ತೆಗೆಯಲೇ ಬೇಕೆಂಬ ನಿಯಮಗಳು ಇರಲಿಲ್ಲ, ಆಗಿನ ಸಂದರ್ಭದಲ್ಲಿ ಟಿ ಇ ಟಿ ಅರ್ಹತಾ ಪರೀಕ್ಷೆ ಪಾಸಾದರೆ ಸಾಕು ೪೩+೫೩ ಅಂಕಗಳು ಪಡೆದ ಅಭ್ಯರ್ಥಿಗಳು ನೇಮಕಾತಿ ಹೊಂದಿದ್ದಾರೆ, ಅಂತ ನೀದರ್ಶನಗಳು ನಮ್ಮ ಕಣ್ಮುಂದೆ ಗೋಚರಿಸಿದ ಸಂಗತಿಗಳು ಇಂದಿಗೆ ಜೀವಂತ ಇವೆ ಎಂದು ದೂರಿದರು, ಹೈದ್ರಾಬಾದ್ ಕರ್ನಾಟಕದ ನೇಮಕಾತಿ ನಿಯಮವಾಳಿ ೮೦:೨೦ ರ ಅನುಪಾತ ಸ್ಥಳೀಯ ವೃಂದಕ್ಕೆ ನಿಗದಿಯಾಗಿದ್ದು, ಅದರಂತೆ ಬೇರೆ ಜಿಲ್ಲೆಯಲ್ಲಿ ೩೭೧ರಿ ಪ್ರದೇಶದ ಅಭ್ಯರ್ಥಿಗಳನ್ನು ನೇಮಕಾತಿ ಮಾಡುವಾಗ ೧೦೦ ಹುದ್ದೆಗಳು ನಿಗದಿಯಾದ ಹಿನ್ನೆಲೆಯಲ್ಲಿ ೮ ಹುದ್ದೆಗಳನ್ನು ಹೈದ್ರಾಬಾದ್ ಕರ್ನಾಟಕದ ಅಭ್ಯರ್ಥಿಗಳಿಗೆ ಕಾಯ್ದಿರಿಸಿ ನೇಮಕ ಮಾಡುವಂತೆ ೩೭೧ರಿ ಜಾರಿ ಮಾಡುವಾಗ ಕೇಂದ್ರ ಸರ್ಕಾರ ಗೆಜೆಟ್ ನಲ್ಲಿ ಈ ನಿಯಮ ಅಳವಡಿಸಿದ್ದರೂ, ರಾಜ್ಯ ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ನೇಮಕಾತಿ ಮಾಡುತ್ತಿದೆ, ಎಂದು ಪದವಿದರ ಶಿಕ್ಷಕರ ಪರವಾಗಿ ಬಳ್ಳಾರಿಯ ವಿಮಾನ ನಿಲ್ದಾಣ ರದ್ದು ಪಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ ಎಂದು ವಕೀಲರಾದ ಮಲ್ಲಿಕಾರ್ಜುನ ರೆಡ್ಡಿ ತೀವ್ರವಾಗಿ ಖಂಡಿಸಿದ್ದರು

ಬಳ್ಳಾರಿ : ಜಲಾಶಯ ರಾಜ್ಯದಲ್ಲಿದ್ದರೂ ತುಂಗಭದ್ರ ಮಂಡಳಿ ರಾಜ್ಯ ಮತ್ತು ಆಂಧ್ರದ್ದಲ್ಲ, ಕೇಂದ್ರದ್ದು. ಬೋರ್ಡ್ ನ ಅಧಿಕಾರಿಗಳು ರಾಜ್ಯದ ಪರವಾಗಿಲ್ಲ. ಇಲ್ಲಿನ ಜನಪ್ರತಿನಿಧಿಗಳ ಮಾತು ಕೇಳುತ್ತಿಲ್ಲ. ಆಂಧ್ರದವರಿಗೆ ಮಾತ್ರ ಮಣೆ ಹಾಕಲಾಗುತ್ತಿದೆ ಎಂದು ದರೂರು ಪುರಿಷೋತ್ತಮಗೌಡ ಆರೋಪಿಸಿದ್ದರು ಮೇಲ್ಮಟ್ಟದ ಕಾಲುವೆಗೆ ಡಿ.೦೫ ಮತ್ತು ೩೦ರವರೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಹಿಂದಿನ ವರ್ಷದಂತೆ ಈ ಬಾರಿಯೂ ನೀರು ಹರಿಸುವಂತೆ ಹೇಳಿದ್ದರೂ ಜಿಲ್ಲೆಗೆ ನೀರು ಹರಿಸುತ್ತಿಲ್ಲ. ಡಿ.೨೦ರಿಂದ ನೀರು ಹರಿಸಲಾಗುವುದು ಎಂದು ಇಲ್ಲಿನ ಜನಪ್ರತಿನಿಧಿಗಳು ಹೇಳಿದ್ದಾರೆ. ಆದರೆ, ೧೫ರಿಂದ ನೀರು ಹರಿಸುವಂತೆ ಮನವಿ ಮಾಡಲಾಗಿದೆ. ಮುಖ್ಯಾಧಿಕಾರಿ ಮಂಜಪ್ಪ ಶಾಸಕರಿಗೆ ಸುಳ್ಳು ಭರವಸೆ ಹೇಳಿ ರೈತರಿಗೆ ಮೋಸ ಮಾಡುತಿದ್ದಾರೆ. ೧೦ದಿನಗಳ ಕಾಲ ನೀರು ಹರಿಸಲು ಒಪ್ಪಿದ್ದಾರೆ. ಕೆಳಮಟ್ಟದ ಕಾಲುವೆಯಲ್ಲಿ ಆಂಧ್ರ ನೀರಿನೊಂದಿಗೆ ನಮ್ಮ ನೀರು ೪೫೦ ಕ್ಯೂಸೆಕ್ ನೀರು ಜಂಟಿಯಾಗಿ ಡಿ. ೨೬ ಮಾರ್ಚ್ ೩೧ ಹರಿಸಲು ತೀರ್ಮಾಬಿಸಲಾಗಿದೆ. ಆದರೆ, ಮೂರು ದಿನಗಳ ಹಿಂದೆ ಕರ್ನೂಲ್ ಜಿಲ್ಲಾಧಿಕಾರಿ ಜ.೧೦ರವರಗೆ ನೀರು ಸಾಕು ಆ ನಂತರ ನೀರು ಬೇಡ ಎಂದು ಪ್ರಕಟಣೆಯ ಹೊರಡಿಸಿದ್ದಾರೆ. ಇದರಿಂದ ಇಲ್ಲಿನ ರೈತರ ಗತಿ ಏನಾಗಬೇಕು. ಈಗಾಗಲೇ ಬೆಳೆ ಬೆಳೆದವರ ಬೆಳೆಗಳಿಗೆ ನೀರು ಇಲ್ಲದೆ ಹಾಳಾಗುತ್ತವೆ. ಇದರಿಂದ ಸಚಿವರು ಶಾಸಕರು ನೀರಾವರಿ ಸಲಹಾ ಸಮಿತಿ ಅಭೆಯ ತೀರ್ಮಾನಗಳಿಗೆ ಬೆಲೆ ಇಲ್ಲದಾಗಿದೆ. ವಾರದ ಗಡುವು ನೀಡಲಾಗುವುದು ಅದರೊಳಗೆ ಒಪ್ಪಸಿದ್ದರೆ, ಸಮನ್ವಯತೆಯಿಂದ ಸಭೆಯ ತೀರ್ಮಾನದಂತೆ ಎರಡೂ ರಾಜ್ಯದವರು ನೀರು ಪಡೆಯಲು ಸಹಕರಿಸಿದಿದ್ದರೆ, ಕಾಲುವೆ ಒಡೆಯುತ್ತೇವೆ ಎಂದು ಎಚ್ಚರಿಸಿದರು. ಆಂಧ್ರ ಕರ್ನಾಟಕದ ರೈತರ ಮಧ್ಯೆ ದೊಡ್ಡ ಗಲಭೆಯಾಗಲಿದೆ. ವಾರದೊಳಗೆ ಸಮನ್ವಯತಯಿಂದ ನೀರು ಬಳಸಿಕೊಳ್ಳಲು ಒಪ್ಪದಿದ್ದರೆ, ಎರಡೂ ರಾಜ್ಯದ ರೈತರ ಮಧ್ಯೆ ಗಲಭೆಗಳಾಗುತ್ತವೆ. ಇದಕ್ಕೆ ಹೊಣೆ ಜಲಾಶಯ ಮಂಡಳಿಯ ಮುಖ್ಯಾಧಿಕಾರಿ ಮತ್ತು ಅಧಿಕಾರಿಗಳೆ. ಈ ಕಾರ್ಯಕ್ರಮದಲ್ಲಿ ಭೀಮನಗೌಡ, ರಾಮನ ಗೌಡ, ಬಸವನಗೌಡ, ಶಿವ, ವೀರೇಶ್, ವೀರನಗೌಡ ಮತ್ತಿತರರು ಭಾಗವಹಿಸಿದರು

ಕೋಮಾ ಸ್ಥಿತಿಗೆ ತಲುಪಿದ ಮಾಜಿ ಕೇಂದ್ರ ಸಚಿವ ವಿ.ಧನಂಜಯ ಕುಮಾರ್

ಮಂಗಳೂರು, ಡಿಸೆಂಬರ್ 06: ಬಿಜೆಪಿಯಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 4 ಬಾರಿ ಸತತವಾಗಿ ಗೆಲುವು ಸಾಧಿಸಿದ್ದ ಧನಂಜಯ ಕುಮಾರ್ ನೆನೆಪಿದೆಯೇ? ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿ ಸದ್ದು ಮಾಡಿದ್ದ ಮಾಜಿ ಕೇಂದ್ರ ಸಚಿವ ವಿ. ಧನಂಜಯ ಕುಮಾರ್ ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.ಕಳೆದ ಕೆಲ ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಿ. ಧನಂಜಯ ಕುಮಾರ್ ಅವರನ್ನು ಕೆಲ ತಿಂಗಳುಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಆದರೆ ಒಂದು ಮಾಹಿತಿಯ ಪ್ರಕಾರ ಇತ್ತೀಚೆಗೆ ಅವರ ಆರೋಗ್ಯ ತೀರಾ ಬಿಗಡಾಯಿಸಿದ ಕಾರಣ ಧನಂಜಯ ಕುಮಾರ್ ಕೋಮಾ ಸ್ಥಿತಿಯಲ್ಲಿದ್ದು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. 67 ವರ್ಷದ ಧನಂಜಯ ಕುಮಾರ್ ಈಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಗುರುತು ಹಿಡಿಯಲಾರದಷ್ಟು ಅವರು ಕೃಶರಾಗಿದ್ದಾರೆ.ವೇಣೂರಿನ ಜೈನ ಮನೆತನದಲ್ಲಿ ಜನಿಸಿದ ಧನಂಜಯ್ ಕುಮಾರ್ ಉಡುಪಿ ವೈಕುಂಠ ಬಾಳಿಗ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಮಂಗಳೂರಿನಲ್ಲಿ ವೃತ್ತಿ ಅರಂಭಿಸಿದರು. ಆ ನಂತರ ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿದರು.ಬಳಿಕ ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ, ಯುವಮೋರ್ಚಾದ ರಾಜ್ಯಾಧ್ಯಕ್ಷ , ಅಖಿಲ ಭಾರತ ಉಪಾಧ್ಯಕ್ಷ ಸಹಿತ ಹಲವು ಹುದ್ದೆಗಳನ್ನು ನಿರ್ವಹಿಸಿದರು.ಪೂಜಾರಿ ಅವರನ್ನು ಸೋಲಿಸುವ ಮೂಲಕ ಪ್ರಥಮ ಬಾರಿಗೆ ಸಂಸದ1983ರ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಗೆದ್ದು ಶಾಸಕರಾದರು. ಬಳಿಕ 85ರ ಚುನಾವಣೆಯಲ್ಲಿ ಪರಾಭವಗೊಂಡರು. 1989 ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದರು. ಆದರೆ 1991 ರಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ಧನ ಪೂಜಾರಿ ಅವರನ್ನು ಸೋಲಿಸುವ ಮೂಲಕ ಪ್ರಥಮ ಬಾರಿಗೆ ಸಂಸದರಾದರು.

ಎನ್‌ಜಿಟಿಯಿಂದ ರಾಜ್ಯ ಸರಕಾರಕ್ಕೆ 50, ಬಿಬಿಎಂಪಿಗೆ 25 ಕೋಟಿ ರೂ. ದಂಡ

ನವದೆಹಲಿ: ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳ ಮಾಲಿನ್ಯ ನಿಯಂತ್ರಿಸಲು ರಾಜ್ಯ ಸರಕಾರ ಮತ್ತು ಬಿಬಿಎಂಪಿ ವಿಫಲವಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಧಿಕರಣ ಸರಕಾರಕ್ಕೆ 50 ಕೋಟಿ ರೂ. ಮತ್ತು ಬಿಬಿಎಂಪಿಗೆ 25 ಕೋಟಿ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.ಇಂದು ಎನ್‌ಜಿಟಿ ಅಧ್ಯಕ್ಷ ನ್ಯಾ. ಅದರ್ಶ್ ಕುಮಾರ್ ಗೋಯಲ್ ನೇತೃತ್ವದ ಪೀಠ ಈ ಆದೇಶವನ್ನು ಹೊರಡಿಸಿದೆ. ಇನ್ನು ಉದೇ ವೇಳೆ ಎನ್‌ಜಿಟಿ, ಯೋಜನೆಗಳ ಅನುಷ್ಟಾನ ಮತ್ತು ಮೇಲುಸ್ತುವಾರಿಗೆ ನಿವೃತ್ತ ನ್ಯಾ. ಎನ್ ಸಂತೋಷ್ ಹೆಗ್ಡೆ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ ರಚಿಸಿದ್ದು, ಈ ಪುನರಾವರ್ತಿಸಿದರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದೆ.

ಬಿಬಿಎಂಪಿ ಕಾರ್ಪೊರೇಟರ್ ಏಳುಮಲೈ ಇನ್ನಿಲ್ಲ

ಬೆಂಗಳೂರು: ಬಿಬಿಎಂಪಿಯ ಸಗಾಯಪುರಂ ವಾರ್ಡಿನ ಪಕ್ಷೇತರ ಸದಸ್ಯ ಏಳುಮಲೈ ಇಂದು ಬೆಳಿಗ್ಗೆ 1:30ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ.ಕಳೆದ 28 ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಏಳುಮಲೈ ನಗರದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೂಗಿನಲ್ಲಿ ಗುಳ್ಳೆ ಆಗಿದೆಯೆಂದು ಸಂತೋಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆ ವೇಳೆ ನೀಡಿದ ಅನಸ್ತೇಷಿಯಾದಿಂದ ಸಮಸ್ಯೆಯಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದೇ ವೇಳೆ ಹೃದಾಯಾಘಾತಕ್ಕೊಳಗಾಗಿದ್ದ ಅವರನ್ನು ಒಂದು ವಾರದ ಹಿಂದೆ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಕೋಮಾ ಸ್ಥಿತಿಯಲ್ಲಿದ್ದ ಏಳುಮಲೈ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಟ್ರ್ಯಾಕ್ಟರ್'ಗೆ ಮರಳು ತುಂಬುವಾಗ ವ್ಯಕ್ತಿ ಸಾವು, ಜೊತೆಗಿದ್ದವರು ಮಾಡಿದ್ದೇನು ಗೊತ್ತೇ..?

ಮಧುಗಿರಿ, ನ.24- ಟ್ರ್ಯಾಕ್ಟರ್‍ಗೆ ಮರಳು ತುಂಬಲು ಹೋಗಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ನಂತರ ಆತನ ಶವವನ್ನು ರಸ್ತೆ ಸಮೀಪದ ಹಳ್ಳಕ್ಕೆ ಎಸೆದು ಹೋಗಿರುವ ಅಮಾನುಷ ಘಟನೆ ಕೊಡಿಗೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಪುರವರ ಹೋಬಳಿಯ ಉಪ್ಪಾರಹಳ್ಳಿ ವಾಸಿ ಮೂರ್ತಿ (37)ಮೃತ ದುರ್ದೈವಿ.ಈತ ಪರಿಚಿತರ ಟ್ರ್ಯಾಕ್ಟರ್‍ಗೆ ಮರಳು ತುಂಬಲು ಸಮೀಪದ ಕೋಡ್ಲಾಪುರದ ಕೆರೆಯ ಬಳಿ ಹೋಗಿದ್ದು, ಕೆರೆಯಲ್ಲಿ ಮರಳು ತುಂಬುವಾಗ ಮರಳಿನ ದಡ ಆಕಸ್ಮಿಕವಾಗಿ ಕುಸಿದು ವ್ಯಕ್ತಿ ಹಾಗೂ ಟ್ರ್ಯಾಕ್ಟರ್ ಮೇಲೆ ಕುಸಿದು ಬಿದ್ದಿದ್ದು ಮೂರ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಘಟನೆಯಿಂದ ಭಯಭೀತರಾದ ಆತನ ಸಂಗಡಿಗರು ಶವವನ್ನು ಹೊಂಡದಿಂದ ಹೊರ ತೆಗೆದು ಪುರವರ-ಐಡಿಹಳ್ಳಿಯ ರಸ್ತೆಯ ಸಮೀಪದ ಹಳ್ಳದಲ್ಲಿ ಎಸೆದು ಟ್ರ್ಯಾಕ್ಟರ್ ಸಮೇತ ಸ್ಥಳದಿಂದ ಪರಾರಿಯಾಗಿದ್ದಾರೆಂದು ಹೇಳಲಾಗುತ್ತಿದೆ. ಈ ಮೊದಲು ಯಾರೋ ಅಪರಿಚಿತರು ಕೊಲೆ ಮಾಡಿ ಶವವನ್ನು ತಂದು ಹಾಕಿದ್ದಾರೆಂಬ ಸುದ್ದಿ ಹರಡಿತ್ತು.ನಂತರ ಮರಳು ದಂಧೆಗೆ ಬಲಿಯಾಗಿದ್ದಾನೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂರುತ್ತಿದೆ.ಈ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಮೋಹನ್ ಕುಮಾರ್ ಮತ್ತು ಸಿಬ್ಬಂದಿವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮನೋಹರ್ ಪರಿಕ್ಕರ್ ರಾಜೀನಾಮೆಗೆ 48 ಗಂಟೆ ಗಡುವು

ಪಣಜಿ, ನ.21: ತೀವ್ರ ಅಸ್ವಸ್ಥರಾದರೂ ಗೋವಾ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದಿರುವ ಮನೋಹರ ಪರಿಕ್ಕರ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ಸಂಜೆ ಹಲವು ಕಾಂಗ್ರೆಸ್ ಮುಖಂಡರು ಸೇರಿದಂತೆ ನೂರಾರು ಮಂದಿ ಮುಖ್ಯಮಂತ್ರಿಗಳ ಖಾಸಗಿ ನಿವಾಸಕ್ಕೆ ಪಾದಯಾತ್ರೆ ನಡೆಸಿದರು. ಪರಿಕ್ಕರ್ ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಅವರ ಸ್ಥಾನದಲ್ಲಿ ಪೂರ್ಣಾವಧಿ ಮುಖ್ಯಮಂತ್ರಿ ಬೇಕು ಎನ್ನುವುದು ಪ್ರತಿಭಟನಾಕಾರರ ಬೇಡಿಕೆ.'ಆಡಳಿತದ ಪುನಃ ಪ್ರತಿಷ್ಠಾಪನೆಗಾಗಿ ಜನರ ಪಾದಯಾತ್ರೆ' ಎಂಬ ಬ್ಯಾನರ್‌ನಡಿ ಸುಮಾರು ಒಂದು ಕಿಲೋಮೀಟರ್ ಪಾದಯಾತ್ರೆ ನಡೆಸಿ, ಪರಿಕ್ಕರ್ ರಾಜೀನಾಮೆಗೆ 48 ಗಂಟೆಗಳ ಗಡುವು ನೀಡಿದರು. ಈ ಪಾದಯಾತ್ರೆಗೆ ಕಾಂಗ್ರೆಸ್ ಹೊರತುಪಡಿಸಿ, ಎನ್‌ಸಿಪಿ ಹಾಗೂ ಶಿವಸೇನೆ ಕೂಡಾ ಬೆಂಬಲ ಸೂಚಿಸಿದ್ದವು. ಸಾಮಾಜಿಕ ಕಾರ್ಯಕರ್ತರು ಮತ್ತು ಸ್ವಯಂಸೇವಾ ಸಂಸ್ಥೆಗಳು ಈ ಪಾದಯಾತ್ರೆ ಆಯೋಜಿಸಿದ್ದವು.ಪರಿಕ್ಕರ್ ತೀವ್ರ ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ತಕ್ಷಣ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಒಂಬತ್ತು ತಿಂಗಳಿಂದ ಪರಿಕ್ಕರ್ ಅಸ್ವಸ್ಥರಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಡೀ ಸರ್ಕಾರಿಯಂತ್ರ ನಿಷ್ಕ್ರಿಯವಾಗಿದೆ ಎಂದು ಆಪಾದಿಸಿದರು.ಪರಿಕ್ಕರ್ ನಿವಾಸದಿಂದ 100 ಮೀಟರ್ ದೂರದಲ್ಲೇ ಪೊಲೀಸರು ಪಾದಯಾತ್ರೆಯನ್ನು ತಡೆದರು. ಅನಾರೋಗ್ಯ ಕಾರಣದಿಂದ ಸಿಎಂ ನಿಮ್ಮನ್ನು ಭೇಟಿ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಸಿಎಂ ರಾಜೀನಾಮೆಗೆ ಬಹಿರಂಗ ಗಡುವು ವಿಧಿಸಿದರು.

ಸಿಎಂ ಸಮಾರಂಭಕ್ಕೆ ಹಾಜರಾಗಲು ಇಲ್ಲಿ ಆಧಾರ್ ತೋರಿಸುವುದು ಕಡ್ಡಾಯ

ರಾಂಚಿ, ನ.20: ಜಾರ್ಖಂಡ್ ಇತಿಹಾಸದಲ್ಲೇ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜನ ತಮ್ಮ ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿದೆ.ಮುಖ್ಯಮಂತ್ರಿ ರಘುವೀರ್ ದಾಸ್ ಸೋಮವಾರ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಭದ್ರತಾ ಕಾರಣಗಳಿಗಾಗಿ ಮತ್ತು ಅನಗತ್ಯ ಗೊಂದಲವನ್ನು ತಪ್ಪಿಸುವ ಸಲುವಾಗಿ ಆಧಾರ್‌ ಕಾರ್ಡ್ ತರುವುದು ಕಡ್ಡಾಯ ಮಾಡಲಾಗಿತ್ತು ಎಂದು ಪಲಮು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಸೋಮವಾರ ನಡೆಯುವ ಕಾರ್ಯಕ್ರಮದ ವೇಳೆ ಸಿಎಂ ವಿರುದ್ಧ ಕಪ್ಪುಬಾವುಟ ಪ್ರದರ್ಶಿಸುವುದಾಗಿ ಅರೆಶಿಕ್ಷಕರ ಸಂಘ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು.ರಾಂಚಿಯಲ್ಲಿ ಗುರುವಾರ ನಡೆಎದ ಸಿಎಂ ಸಮಾರಂಭದಲ್ಲಿ ಅರೆಶಿಕ್ಷಕರು ಕಪ್ಪುಬಾವುಟ ಪ್ರದರ್ಶಿಸಿದ್ದರು. ಗುಂಪು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಇಂಥ ಅನಗತ್ಯ ಗೊಂದಲ ತಪ್ಪಿಸಲು ಮತ್ತು ಸೂಕ್ತ ಭದ್ರತೆ ಒದಗಿಸಲು ಆಧಾರ್ ಅಥವಾ ಪಾನ್‌ ಕಾರ್ಡ್ ಕಡ್ಡಾಯಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂತನು ಕುಮಾರ್ ಅಗ್ರಹಾರಿ ಸ್ಪಷ್ಟಪಡಿಸಿದ್ದಾರೆ."ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕಪ್ಪು ಉಡುಪು ಹೊಂದಿರುವ ಅಥವಾ ಯಾವುದೇ ಕಪ್ಪು ವಸ್ತುಗಳನ್ನು ಹೊಂದಿದ ಶಂಕಿತ ವ್ಯಕ್ತಿಗಳನ್ನು ಪ್ರವೇಶದ್ವಾರದಲ್ಲೇ ಹೊರಕ್ಕೆ ಕಳುಹಿಸಲಾಗುತ್ತಿದೆ" ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.ಜಿಲ್ಲಾಡಳಿತದ ಕ್ರಮವನ್ನು ಜೆಎಂಎಂ ಶಾಸಕ ಬಹುರಂಗೋರಾಮ್ ಸಾರಂಗಿ ವಿರೋಧಿಸಿದ್ದು, ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವ ನಾಗರಿಕರಿಗೆ ನಿರ್ಬಂಧ ಹೇರಿರುವುದು ಖಂಡನೀಯ ಎಂದು ಹೇಳಿದ್ದಾರೆ. ಜನರಿಂದ ಸಿಎಂ ದೂರವಾಗಲು ಬಯಸಿದ್ದಾರೆ ಎನ್ನುವುದಕ್ಕೆ ಇದು ನಿದರ್ಶನ ಎಂದು ಖಂಡಿಸಿದ್ದಾರೆ.

ತಡರಾತ್ರಿ ಶಬರಿಮಲೆಯಲ್ಲಿ ಭಕ್ತರು-ಪೊಲೀಸರ ಘರ್ಷಣೆ: ಕೇರಳದಾದ್ಯಂತ ಭಾರೀ ಪ್ರತಿಭಟನೆ

ಶಬರಿಮಲೆ, ನ.19: ಶಬರಿಮಲೆ ದೇಗುಲದಲ್ಲಿ ತಡರಾತ್ರಿ ಸುಮಾರು 70 ಅಯ್ಯಪ್ಪ ಭಕ್ತರನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿವೆ.ಪೊಲೀಸರ ನಿರ್ಬಂಧ ಹಾಗೂ ಪೊಲೀಸ್ ಪಡೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ನೂರಾರು ಅಯ್ಯಪ್ಪ ಭಕ್ತರು ತಡರಾತ್ರಿ ಪ್ರತಿಭಟನೆ ನಡೆಸಲಾರಂಭಿಸಿದರು. ದೇವಸ್ಥಾನದ ಆವರಣದಲ್ಲಿ ರಾತ್ರಿ ತಂಗುವ ಕುರಿತು ವಿಧಿಸಿರುವ ನಿಷೇಧವನ್ನು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.ರವಿವಾರ ರಾತ್ರಿ ನಡೆದ ಘಟನೆಯನ್ನು ಖಂಡಿಸಿ ಸಂಘಪರಿವಾರದ ಕಾರ್ಯಕರ್ತರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಿರುವನಂತಪುರದಲ್ಲಿರುವ ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಬಿಜೆಪಿ ಕಾರ್ಯಕರ್ತರು ಕೊಚ್ಚಿ, ಕೋಯಿಕ್ಕೋಡ್, ಮಲ್ಲಪ್ಪುರಂ, ಅರನಮೂಲ,ಕೊಲ್ಲಂ, ಕಾಲಾಡಿ ಹಾಗೂ ಇಡುಕ್ಕಿ ಸಹಿತ ಹಲವು ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.ಈ ಹಿಂದಿನ ಹಿಂಸಾಚಾರ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಸನ್ನಿಧಾನಂ ಹಾಗೂ ದೇವಸ್ಥಾನ ಒಳಗೆ ಭಕ್ತಾಧಿಗಳಿಗೆ ಕಠಿಣ ನಿರ್ಬಂಧ ಹೇರುತ್ತಿದ್ದಾರೆ. ರಾತ್ರಿ ವೇಳೆ ದೇವಸ್ಥಾನದಲ್ಲಿ ತಂಗುವುದಕ್ಕೆ ಅವಕಾಶವನ್ನು ನಿರಾಕರಿಸಲಾಗಿದೆ.

ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ಓಪನ್

ಶಬರಿಮಲೆ, ನ.16: ಶಬರಿಮಲೆ ಶ್ರೀ ಅಯ್ಯಪ್ಪ ದೇವಾಲಯದ ಬಾಗಿಲು ಗುರುವಾರ ಸಂಜೆ ತೆರೆಯಲಾಗಿದ್ದು, ಇಂದು ದೇವಸ್ಥಾನದಲ್ಲಿ ಪೂಜೆಗೆ ಅರ್ಚಕರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.ಶನಿವಾರದಿಂದ ಅಯ್ಯಪ್ಪ ಭಕ್ತಾಧಿಗಳಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ದೊರೆಯಲಿದೆ. ಸುಪ್ರೀಂ ಕೋರ್ಟ್ ಎಲ್ಲ ವಯಸ್ಸಿನ ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಿಸಬಹುದು ಎಂದು ತೀರ್ಪು ನೀಡಿದ ಬಳಿಕ ಮೂರನೇ ಬಾರಿ ದೇವಸ್ಥಾನದ ಬಾಗಿಲು ತೆರೆಯಲಾಗಿದೆ.ದೇವಸ್ಥಾನಕ್ಕೆ ಎಲ್ಲ ಮಹಿಳೆಯರಿಗೂ ಪ್ರವೇಶ ಕಲ್ಪಿಸುವ ವಿಚಾರದಲ್ಲಿ ಪ್ರತಿಭಟನೆ ಮುಂದುವರಿದಿದ್ದು,ದೇವಸ್ಥಾನಕ್ಕೆ ಪ್ರವೇಶ ಕೋರಿ ಈಗಾಗಲೇ 500ಕ್ಕೂ ಅಧಿಕ ಮಹಿಳೆಯರು ಹೆಸರು ನೋಂದಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಜನಾರ್ದನ ರೆಡ್ಡಿಗೆ ಇನ್ನೂ ಒಂದು ದಿನ ಜೈಲೇ ಗತಿ..!

ಬೆಂಗಳೂರು, [ನ.13]: ಅಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಮಾಜಿ ಸಿಚಿವ ಜನಾರ್ದನ ರೆಡ್ಡಿ ಜಾಮೀನು ತೀರ್ಪು ನಾಳೆಗೆ [ಬುಧವಾರ] ಮುಂದೂಡಿದೆ.ನವೆಂಬರ್ 12ರಂದು ಸೋಮವಾರ ಜಾಮೀನಿಗಾಗಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಕೇಂದ್ರ ಸಚಿವ ಅನಂತ ಕುಮಾರ್ ಅವರ ನಿಧನದಿಂದಾಗಿ ಕೋರ್ಟ್ ರಜೆ ಇತ್ತು.ಹಾಗಾಗಿ ಇಂದು [ಮಂಗಳವಾರ] ಜನಾರ್ದನ ರೆಡ್ಡಿ ಪರ ವಕೀಲ C.H.ಹನುಮಂತರಾಯ 1ನೇ ACMM ನ್ಯಾಯಾಲಯಕ್ಕೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.ಆದರೆ, ನ್ಯಾಯಧೀಶ ಜಗದೀಶ್ ಅವರು ಜಾಮೀನು ತೀರ್ಪು ಅನ್ನ ನಾಳೆ ಅಂದರೆ ಬುಧವಾರಕ್ಕೆ ಮುಂದೂಡಿದ್ದಾರೆ. ಹೀಗಾಗಿ ಇಂದು ರಾತ್ರಿ ಕೂಡ ರೆಡ್ಡಿ ಜೈಲಿನಲ್ಲಿಯೇ ಕಳೆಯಬೇಕಿದೆ.ಮತ್ತೊಂದೆಡೆ ರೆಡ್ಡಿಗೆ ಜಾಮೀನು ನೀಡದಂತೆ ಆಕ್ಷೇಪಣೆ ಪಡೆಸಿದ್ದು, ಪ್ರಕರಣ ತನಿಖಾ ಹಂತದಲ್ಲಿದೆ ಒಂದು ವೇಳೆ ಬೇಲ್ ಕೊಟ್ಟರೆ ಆರೋಪಿ ಎಸ್ಕೇಪ್ ಆಗುತ್ತಾರೆ.ಹೀಗಾಗಿ ಯಾವುದೇ ಕಾರಣಕ್ಕೂ ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಲು​ಸಿಸಿಬಿ ನಿರ್ಧರಿಸಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ನೆಲಮಂಗಲ ಬಳಿ ಶೀಘ್ರ ಕಸದಿಂದ ವಿದ್ಯುತ್ ತಯಾರಿಕಾ ಘಟಕ: ಪರಮೇಶ್ವರ

ಬೆಂಗಳೂರು, ನವೆಂಬರ್ 13: ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಸಂಬಂಧ ಸತಾರಾಂ ಕಂಪನಿಗೆ ಈಗಿರುವ ಕನ್ನಳ್ಳಿ- ಸೀಗೆಹಳ್ಳಿಯಲ್ಲಿ ಪ್ರಾಯೋಗಿಕವಾಗಿ ನಡೆಸಲು ಹಾಗೂ ನೆಲಮಂಗಲದಲ್ಲಿ ಹೊಸದಾಗಿ ವಿದ್ಯುತ್ ತಯಾರಕಾ ಘಟಕ ನಿರ್ಮಿಸಲು ಅವಕಾಶ ನೀಡುವ ಸಂಬಂಧ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ ಚರ್ಚಿಸಿದರು.ಹಸಿ ಕಸ ನಿರ್ವಹಣೆ ಉತ್ತೇಜನಕ್ಕೆ ತೆರಿಗೆ ವಿನಾಯ್ತಿಗಾಗಿ ಅಭಿಯಾನಬಿಬಿಎಂಪಿ ಹಿರಿಯ ಅಧಿಕಾರಿಗಳು ಹಾಗೂ ಸತಾರಾಂ ಕಂಪನಿ ಮುಖ್ಯಸ್ಥರೊಂದಿಗೆ ಅವರು ಮಂಗಳವಾರ ಸಭೆ ನಡೆಸಿದರು. ಸತಾರಾಂ ಈಗಾಗಲೇ ಚೆನ್ನೈ,ಯೂರೋಪ್, ಬ್ರೆಸಿಲ್‌ ಸೇರಿದಂತೆ 14 ನಲ್ಲಿ ವೇಸ್ಟ್‌ ಟು ಎನರ್ಜಿ ಪ್ಲಾಂಟ್‌ ನಡೆಸುತ್ತಿದೆ. ಇದೇ ಮಾದರಿಯಲ್ಲಿ ನೆಲಮಂಗಲದಲ್ಲಿ ಪ್ಲಾಂಟ್ ತೆರೆಯುವ ಸಂಬಂಧ ಪ್ರಾತ್ಯಕ್ಷಿಕೆ ವೀಕ್ಷಿಸಿದ ಪರಮೇಶ್ವರ್ ಅವರು, ಸಂಪೂರ್ಣ ಮಾಹಿತಿ ಪಡೆದರು.ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲಹೊಸದಾಗಿ ಪ್ಲಾಂಟ್‌ ನಿರ್ಮಾಣ ಹೆಚ್ಚು‌ ಸಮಯ ಹಿಡಿಯುವುದಲ್ಲದೇ, ಇದರ ನಿರ್ವಹಣದ ಗುಣಮಟ್ಟ ತಿಳಿಯಲು ಸಮಯ ಬೇಕಾಗಲಿದೆ. ಹೀಗಾಗಿ ಈಗಿರುವ ಸೀಗೆಹಳ್ಳಿ ಹಾಗೂ ಕಲ್ಲಳ್ಳಿ ಪ್ಲಾಂಟ್‌ನಲ್ಲಿಯೇ ಪ್ರಾಯೋಗಿಕವಾಗಿ ಕೆಲಸ ಪ್ರಾರಂಭಿಸುವುದು ಸೂಕ್ತ ಎಂಬ ಅಭಿಪ್ರಾಯ ಹೊರಹಾಕಿದರು.ತ್ಯಾಜ್ಯ ಸುಡುವುದರಿಂದ ಈ 22 ಕಾಯಿಲೆಗಳು ಬರಬಹುದು ಹುಷಾರ್!ಒಟ್ಟಾರೆ ಇನ್ನು ಕೆಲವೇ ದಿನಗಳಲ್ಲಿ ವೇಸ್ಟ್‌ ಟು ಎನರ್ಜಿ ಪ್ಲಾಂಟ್‌ ನಿರ್ಮಾಣ ಮಾಡುವ ಸಂಬಂಧ ಕ್ಯಾಬಿನೆಟ್‌ನಲ್ಲಿಯು ಶೀಘ್ರವೇ ಒಪ್ಪಿಗೆ ಪಡೆದು ಕನಿಷ್ಠ ಒಂದು ಪ್ಲಾನ್‌ ನಿರ್ಮಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದರು. ಅಪರ ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್, ಬಿಎಂಆರ್‌ಡಿಎ ಆಯುಕ್ತ ಮೋಹನ್ ರಾಜ್, ಬಿಡಿಎ ಆಯುಕ್ತ ರಾಜೇಶ್ ಇತರೆ ಅಧಿಕಾರಿಗಳು ಇದ್ದರು.

ಅನಂತಕುಮಾರ್ ’ಅನಂತ ಅಂತಿಮ ನಮನ’

ಬೆಂಗಳೂರು, ನ.13: ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ನಿಧನರಾದ ಕೇಂದ್ರ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅನಂತ ಕುಮಾರ್ ಅವರ ಅಂತ್ಯಸಂಸ್ಕಾರ ಮಧ್ಯಾಹ್ನ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಸಕಲ ಸರಕಾರಿ ಗೌರವದೊಂದಿಗೆ ವೈದಿಕ ಸಂಪ್ರದಾಯದಂತೆ ನೆರವೇರಿತು.ಅನಂತಕುಮಾರ್‌ಗೆ ಗಂಡುಮಕ್ಕಳಿಲ್ಲದ ಕಾರಣ ಸಹೋದರ ನಂದಕುಮಾರ್ ವಿಧಿವಿಧಾನ ನೆರವೇರಿಸಿದರು.ರಕ್ಷಣಾ ಇಲಾಖೆಯ ಮೂರು ಪಡೆಗಳು ಅನಂತಕುಮಾರ್ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಿದವು.ಎಲ್‌ಕೆ ಅಡ್ವಾಣಿ, ಅಮಿತ್ ಶಾ, ಗೃಹ ಸಚಿವ ರಾಜ್‌ನಾಥ್ ಸಿಂಗ್, ಕಾನೂನು ಸಚಿವ ರವಿಶಂಕರ ಪ್ರಸಾದ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್,ರೈಲ್ವೆ ಸಚಿವ ಪಿಯೂಷ್ ಗೊಯೆಲ್, ರಾಜ್ಯ ಸಚಿವರಾದ ಡಿಕೆ ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೇಂದ್ರ ಸಚಿವ ಸದಾನಂದ ಗೌಡ ಮತ್ತಿತರರು ಅನಂತಕುಮಾರ್‌ಗೆ ಪುಷ್ಪ ನಮನ ಸಲ್ಲಿಸಿದರು.ಇಂದು ನ್ಯಾಶನಲ್ ಕಾಲೇಜು ಮೈದಾನದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಅನಂತಕುಮಾರ್‌ಗೆ ಅಂತಿಮ ನಮನ ಸಲ್ಲಿಸಿ ಅವರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.ಸೋಮವಾರವಿಡೀ ಅನಂತಕುಮಾರ್ ಪಾರ್ಥಿವ ಶರೀರವನ್ನು ಬಸವನಗುಡಿಯಲ್ಲಿರುವ ಅವರ ನಿವಾಸದಲ್ಲಿ ಇಡಲಾಗಿತ್ತು. ಮಂಗಳವಾರ ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಬಳಿಕ ನ್ಯಾಶನಲ್ ಮೈದಾನಕ್ಕೆ ಪಾರ್ಥಿವ ಶರೀರವನ್ನು ಸ್ಥಳಾಂತರಿಸಲಾಯಿತು.

ಟಿಪ್ಪು ಸುಲ್ತಾನ್ ಜಯಂತಿಯನ್ನು ಹಬ್ಬದ ವಾತಾವರಣದಂತೆ ಅಚರಿಸಬೇಕು - ತಾ.ಪಂ. ಅಧ್ಯಕ್ಷ ಸೊಗಡುವೆಂಕಟೇಶ್

ಪಾವಗಡ;- ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಹಬ್ಬದ ವಾತಾವರಣದಂತೆ ಅಚರಿಸಬೇಕು, ಎಂದು ತಾ.ಪಂ. ಅಧ್ಯಕ್ಷ ಸೊಗಡುವೆಂಕಟೇಶ್ ತಿಳಿಸಿದರು. ಶನಿವಾರ ತಾಲ್ಲೂಕು ಅಡಳಿತ ಹಮ್ಮಿಕೊಂಡಿದ್ದ ಪಾವಗಡ ಪಟ್ಟಣದ ಗುರುಭವನದಲ್ಲಿ ೨೬೭ ನೇ ಟಿಪ್ಪು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭಾ ಮುಖ್ಯಾಧಿಕಾರಿ ಜಿ. ನವೀನ್ ಚಂದ್ರ ಮಾತನಾಡಿ, ಟಿಪ್ಪುಸುಲ್ತಾನ್ ಹಿಂದು ವೀರೋದಿಯಾಗಿರಲಿಲ್ಲ ತನ್ನ ರಾಜ್ಯದ ಉಳಿವಿಗಾಗಿ ತನ್ನ ಮಕ್ಕಳನ್ನೆ ಅಡವಿಟ್ಟಿದ್ದ ಅಪ್ರತಿಮ ವೀರ ಎಂದು ಬಣ್ಣಿಸಿದರು. ಜನಪದ ಸಾಹಿತಿ ಸಣ್ಣನಾಗಪ್ಪ ಮಾತನಾಡಿ, ಟಿಪ್ಪುವಿನ ತಂದೆ ಹೈದರ್ ಗೆ ಮಕ್ಕಳಾಗದಿದ್ದಾಗ, ಪಾವಗಡ ತಾಲ್ಲೂಕಿನ ಅವದೂತದರಾದ ವದನಕಲ್ ತಿಪ್ಪೇರುದ್ರಸ್ವಾಮಿಯ ಅನುಗ್ರಹದಿಂದ ಟಿಪ್ಪು ಜನಿಸಿದ್ದರಿಂದ ತಿಪ್ಪೇರುದ್ರಸ್ವಾಮಿಯ ಹೆಸಟ್ಟಿದ್ದು, ಕಾಲಾನಂತರ ಟಿಪ್ಪುಸುಲ್ತಾನ್ ಎಂಬ ಹೆಸರಾಯಿತು ಎಂದು ವಿವರಿಸಿದರು. ಪೊನ್ನಸಮುದ್ರಬುಡೇನ್ ಬಾಬು ಮಾತನಾಡಿ, ಎಲ್ಲಾ ದರ್ಮದ ನ್ಯಾಯ್ಯಾದೀಶರನ್ನು ಟಿಪ್ಪುಸುಲ್ತಾನ್ ನ್ಯಾಯ ವ್ಯವಸ್ಥೆಯಲ್ಲಿ ಸೇರಿಸಿಕೊಂಡಿದ್ದರು, ಎಲ್ಲಾ ದರ್ಮದವರನ್ನು ಪ್ರೀತಿಸುತ್ತಿದ್ದ, ಗುಪ್ತರ‍್ಯಾಕೇಟ್ ತಯಾರಿಸಿದವರಲ್ಲಿ ಟಿಪ್ಪು ಸುಲ್ತಾನ್ ಮೊದಲಿಗರು ಎಂದರು. ತಹಶೀಲ್ದಾರ್ ಡಿ.ಎನ್.ವರದರಾಜು, ಪುರಸಭಾ ಸದಸ್ಯ ರಿಜ್ವಾನ್ ಹುಲ್ಲಾ, ಕ.ಸಾ.ಪ. ಅಧ್ಯಕ್ಷ ಆರ್.ಟಿ. ಖಾನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್, ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮುಸ್ಲಿಂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇ.ಒ. ನರಸಿಂಹಮೂರ್ತಿ, ತಾ.ಪಂ. ಉಪಾಧ್ಯಕ್ಷೆ ಕೃಷ್ಣವೇಣಿ ಅದಿನಾರಾಯಣ, ಮಾಜಿ, ಜಿ.ಪಂ. ಸದಸ್ಯ ಮಹಮದ್ ಫಜುಲುಲ್ಲಾ, ಮಾಜಿ ಪುರಸಭಾ ಸದಸ್ಯ ಅನ್ವರ್ ಸಾಬ್, ಅರ್.ಕೆ.ನಿಸಾರ್ ಅಹಮದ್,ರೈತ ಸಂಘದ ಜಿ.ನರಸಿಂಹರೆಡ್ಡಿ, ಮತ್ತಿತರರು ಹಾಜರಿದ್ದರು. ಕಾರ್ಯಕ್ರಮ ನಡೆಯುವ ಗುರುಭವನದ ಸುತ್ತ-ಮುತ್ತ ಬಿಗಿಪೋಲಿಸ್ ಬಂದೋ ಭಸ್ತ್ ವ್ಯವಸ್ಥೆಯನ್ನು ಪಾವಗಡ ಠಾಣಾ ಎಸ್. ಐ. ಮಧುಸೂಧನ್ ಕಲಪಿಸಿದ್ದರು.

ಕೋಟಗುಡ್ಡ ಗ್ರಾಮದಲ್ಲಿರುವ ಎಸ್‌ಬಿಐ ಶಾಖೆಯನ್ನು ಪಾವಗಡ ಪಟ್ಟಣದ ಶಾಖೆಗೆ ವಿಲೀನಗೊಳಿಸುವುದನ್ನು ಖಂಡಿಸಿ ಪ್ರತಿಭಟನೆ

ಪಾವಗಡ :- ತಾಲ್ಲೂಕೀನ ಕೋಟಗುಡ್ಡ ಗ್ರಾಮದಲ್ಲಿರುವಾ ಎಸ್‌ಬಿಐ ಶಾಖೆಯನ್ನು ಪಾವಗಡ ಪಟ್ಟಣದ ಶಾಖೆಗೆ ವಿಲೀನಗೊಳಿಸುವುದನ್ನು ಖಂಡಿಸಿ ನಡೆಸುತ್ತಿರುವಾ ಪ್ರತಿಭಟನಾ ಧರಣೆ ಮೂರನೆ ದಿನದಲ್ಲಿ ಮುಂದುವರೆದಿದೆ. ಶ್ರೀ ವಾಲ್ಮೀಕಿ ಜಾಗೃತಿ ವೇದಿಕೆಯ ಕಸಭಾ ಹೋಬಳಿ ಅದ್ಯಕ್ಷರಾದ ಓಂಕಾರ್ ನಾಯಕ ಧರಣೆಯಲ್ಲಿ ಭಾಗವಹಿಸಿ ಮಾತನಾಡಿ ಸುಮಾರು ೩೦ ವರ್ಷಗಳಿಂದ ಕೋಟಗುಡ್ಡ ಗ್ರಾಮದಲ್ಲಿ ಎಸ್‌ಬಿಐ ಶಾಖೆ ಕಾರ್ಯನಿರ್ವಹಿಸಿದ್ದು , ಕಳೆದಾ ವರ್ಷ ಎಸ್‌ಬಿಎಮ್ ಶಾಖೆಗಳನ್ನು ಎಸ್‌ಬಿಐ ಶಾಖೆಗೆ ವಿಲೀನಗೊಳಿಸಿದ ಸಂದರ್ಭದಲ್ಲಿ ಪಾವಗಡ ಪಟ್ಟಣದ ಎಸ್‌ಬಿಐ ನೂತನ ಶಾಖೆಯನ್ನು ಕೂಡ ವಿಲೀನಮಾಡಿ ಶಾಖೆಗೆ ಬರುವಾ ಗ್ರಾಹಕರಿಗೆ ವ್ಯವಹಾರ ಮಾಡಲು ಕೂಡ ಅಲ್ಲಿನ ಶಾಖೆಗೆ ಕಷ್ಟಸಾಧ್ಯವಾಗಿದೆ ಅಲ್ಲದೆ ಗ್ರಾಮೀಣ ಭಾಗದ ಕೋಟಗುಡ್ಡ ಶಾಖೆಯಲ್ಲಿ ಸುಮಾರು ನಲವತ್ತು ಹಳ್ಳಿಗಳ ಗ್ರಾಹಕರು ವ್ಯವಹಾರ ಕೃಷಿ ಸಾಅಲ , ಸಾಲ ಸೌಲಭ್ಯ ಪಡೆದಿದ್ದು , ಈ ಶಾಖೆಯನ್ನು ಸ್ಥಳಾಂತರ ಮಾಡಿದರೆ ಈ ಭಾಗದ ವೃದ್ದರು , ರೈತರು ,ವಿದ್ಯಾರ್ಥಿಗಳಿಗೆ ತೋಂದರೆಯಾಗುವುದಲ್ಲದೆ ಪ್ರತಿದಿನ ೨೦ ಕಿಲೋ ಮೀಟರ್ ದೂರ ಬ್ಯಾಂಕ್ ವ್ಯವಹಾರಕ್ಕೆ ಬರಬೇಕಾಗುತ್ತದೆ , ವಿಲೀನ ಮಾಡದೇ ಇಲ್ಲಿಯೇ ಮುಂದುವರೆಯ ಬೇಕು ಈ ಶಾಖೆ ವಿಲೀನಗೋಳಿಸಿದರೆ ಉಗ್ರಹೋರಾಟಕ್ಕೆ ಕರೆ ನೀಡುವುದಾಗಿ ತಿಳಿಸಿದರು. ಇದೇ ವೇಳೆ ನಿಡೆಗಲ್ ಹೋಬಳಿಯ ವಿವಿಧ ಸಂಘ ಸಂಸ್ಥೆಗಳು ಮೂರನೆ ದಿನದ ಪ್ರತಿಭಟನಾ ಧರಣೆಯಲ್ಲಿ ಭಾಗವಹಿಸಿದ್ದವು. ಎಸ್‌ಬಿಐ ಶಾಖೆ ವಿಲೀನತೆಯನ್ನು ವಿರೋದಿಸಿ ಕಸಭಾ ಹೋಬಳಿಯ ವಾಲ್ಮೀಕಿ ಜಾಗೃತಿ ವೃದಿಕೆಯ ವೇದಿಕೆಯ ಅದ್ಯಕ್ಷರಾದ ಓಂಕಾರ್ ನಾಯಕ ಭಾಗವಹಿಸಿದ್ದರು

Click here to edit the title

ಭಾರತ, ಬಾಂಗ್ಲಾದೇಶ ಮತ್ತು ಮಧ್ಯಪೂರ್ವದೇಶಗಳಲ್ಲಿ ಆನ್ಮೋ ವಿಡಿಯೋಗಳನ್ನು ಬಿಡುಗಡೆ ಮಾಡಿದಆನ್ ಮೊಬೈಲ್

ಮೊಬೈಲ್ ಮನರಂಜನೆಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಆನ್ ಮೊಬೈಲ್ ಕಂಪನಿಯು ಭಾರತ,ಬಾಂಗ್ಲಾದೇಶ ಮತ್ತು ಮಧ್ಯ ಪೂರ್ವದೇಶಗಳ ಐದು ಪ್ರಮುಖ ಅಪರೇಟರುಗಳ ಮೂಲಕ ಆನ್ಮೋ ವಿಡಿಯೋಗಳನ್ನು ಬಿಡುಗಡೆ ಮಾಡಿದೆ. ಜಾಗತಿಕ ಮಟ್ಟಕ್ಕೆ ಹೋಲಿಸಿದರೆ, ಭಾರತೀಯರಲ್ಲಿ ತಮ್ಮ ಸ್ಥಳೀಯ ಭಾಷೆಯ ಬಗ್ಗೆ ಅಭಿಮಾನ ಹೆಚ್ಚು. ತಮ್ಮ ಸಮುದಾಯ ಮತ್ತು ಸಂಸ್ಕೃತಿಗೆ ತುಂಬಾ ಹತ್ತಿರವಿರುವ ಕಾರಣ ಭಾರತೀಯರು ತಮ್ಮ ಸ್ಥಳೀಯ ಭಾಷೆಯಲ್ಲಿಯೇ ವಿಷಯ ಇರುವುದನ್ನು ಅಪೇಕ್ಷೆ ಪಡುತ್ತಾರೆ. ಆದರೆ, ಅಪೇಕ್ಷಿತ ವಿಷಯವು, ವಿವಿಧ ಚಾನೆಲ್ ಗಳಿಗೆ ಸಂಬಂಧ ಪಟ್ಟಂತೆ ಬೇರೊಂದು ಸ್ಥಳದಲ್ಲಿ, ಮತ್ತ್ಯಾವುದೊ ಫಾರ್ಮಾಟಿನಲ್ಲಿ ಲಭ್ಯವಿರುವುದೇ ದೊಡ್ಡ ಸವಾಲಾಗಿದೆ. ವಿಡಿಯೋ ಮನರಂಜನೆಯ ‘ಏಕೈಕ ನಿಲುಗಡೆಯ ತಾಣ’ ಎಂಬ ಪೋರ್ಟಲ್ ಆಗಿ ಹೊರಹೊಮ್ಮಲಿದೆ ಆನ್ಮೋ ವಿಡಿಯೋ. ಆರಂಭದಲ್ಲಿ ಅದು ಕನ್ನಡ, ತಮಿಳು, ಮಲಯಾಳಂ, ತೆಲುಗು ಮತ್ತು ಬಂಗಾಳಿ-ಈ ಐದು ಭಾಷೆಗಳಲ್ಲಿ ಎಲ್ಲೂ ಸಿಗದಂತ ಶ್ರೀಮಂತ ಮತ್ತು ವಿಶೇಷ ವಿಷಯಗಳನ್ನು ಗ್ರಾಹಕರಿಗೆ ಒದಗಿಸಲಿದೆ. ಗೃಹಿಣಿ, ಕಾಲೇಜು ವಿದ್ಯಾರ್ಥಿ, ಶಾಲಾ ಮಕ್ಕಳು, ವೃತ್ತಿನಿರತ ವೃತ್ತಿಪರರು ಅಥವಾ ಹಿರಿಯ ನಾಗರಿಕರು-ಯಾರೇ ಆಗಲಿ, ಆನ್ಮೋ ವಿಡಿಯೋಗಳು 12 ಕೆಟಗರಿಗಳಲ್ಲಿ, ಎಲ್ಲರಿಗೂ ಇಷ್ಟ ಆಗುವ  ಮನರಂಜನೆಯ ವಿಧದಲ್ಲಿ ಮೂಡಿ ಬರಲಿವೆ. ಮೂವಿ ದೃಶ್ಯಾವಳಿ, ಅಡುಗೆ ವಿಧಾನ, ಆಸಕ್ತಿಯ ಸ್ಥಳ, ಸೌಂದರ್ಯಕ್ಕೆ ಟಿಪ್ಸ್, ಮಕ್ಕಳ ಮನರಂಜನೆ, ಭಕ್ತಿ, ಆರೋಗ್ಯ ಮತ್ತು ಫಿಟ್ನೆಸ್ ಮುಂತಾದ ಕೆಟಗೆರಿಗಳನ್ನು ಅದು ಒಳಗೊಂಡಿದೆ. ಇದರ ಚಂದಾದಾರಿಕೆಯ ಶುಲ್ಕವೂ ಕಡಿಮೆ. ಬಳಕೆದಾರರ ಅನುಭವ ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ರೆಕಮಂಡೇಶನ್ಸ್, ಬುಕ್ ಮಾರ್ಕ್ಸ್, ಸೋಶಿಯಲ್ ಶೇರಿಂಗ್ ಮತ್ತು ಸ್ಮಾರ್ಟ್ ನೋಟಿಫಿಕೆಶನ್ ವೈಶಿಷ್ಟ್ಯತೆಗಳೊಂದಿಗೆ ಆನ್ಮೋ ವಿಡಿಯೋಗಳು ಒಡಮೂಡಲಿವೆ. ವೆಬ್, ಮೊಬೈಲ್ ಮತ್ತು ಕಡಿಮೆ ಬ್ಯಾಂಡ್ವಿಡ್ತ್ ಗೂ ಹೊಂದಿಕೊಳ್ಳುವಂತೆ ವಿಡಿಯೊ ರೂಪಿಸಲಾಗಿದೆ. ಈ ಬಗ್ಗೆ ಮಾತನಾಡಿದ ಆನ್ಮೊಬೈಲ್ ಗ್ಲೋಬಲ್ ಕಂಪನಿಯ ಭಾರತ, ಏಷ್ಯಾ, ಮಧ್ಯ ಪೂರ್ವ ಮತ್ತು ಆಫ್ರಿಕಾ ದೇಶಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷರಾದ ಶ್ರೀ ಸಂಜಯ್ ಭಾಂಬ್ರಿ, “ಮುಂದಿನ ಐದು ವರ್ಷಗಳಲ್ಲಿ ಸರಿಸುಮಾರು ಹತ್ತು ಇಂಟರ್ನೆಟ್ ಬಳಕೆದಾರರ ಪೈಕಿ ಒಂಬತ್ತು ಮಂದಿ ಭಾರತೀಯರೇ ಆಗಿರುವ ಸಾಧ್ಯತೆಗಳು ಇವೆ. ಡಾಟಾ ಜಾಲ ಮತ್ತು ಸ್ಮಾರ್ಟ್ ಫೋನಿನ ಹೆಚ್ಚಿನ ಲಭ್ಯತೆ ಮತ್ತು ಕಡಿಮೆ ವೆಚ್ಚದ ಕಾರಣ ಡಿಜಿಟಲ್ ಮಾರ್ಕೆಟಿನಲ್ಲಿ ಸ್ಥಳೀಯ ವಿಷಯದ ಬಳಕೆಯ ವಿಷಯದಲ್ಲಿ ಅತಿದೊಡ್ಡ ಮಾರುಕಟ್ಟೆ ಲಭ್ಯವಿದೆ. ಹಾಗಾಗಿ 12 ಕೆಟಗರಿಗಳಲ್ಲಿ, ಪ್ರಾದೇಶಿಕ ಭಾಷೆಯ ವೀಕ್ಷಕರ ಅಗತ್ಯಗಳಿಗೆ ಸೂಕ್ತ ಎನಿಸುವ ನಿಟ್ಟಿನಲ್ಲಿ ಸಮಗ್ರ ಮನರಂಜನಾ ವೇದಿಕೆ ಕಲ್ಪಿಸುವ ಮೂಲಕ ಆನ್ಮೋ  ವಿಡಿಯೋಗಳು ಈ ಅಂತರವನ್ನು ಭರ್ತಿ ಮಾಡುವ ಪ್ರಯತ್ನ ಮಾಡಲಿವೆ” ಎಂದರು. ಆನ್ ಮೊಬೈಲ್ ಕುರಿತಂತೆ: ಆನ್ ಮೊಬೈಲ್ (ಎನ್ಎಸ್ಇ ಭಾರತ : ಆನ್ಮೊಬೈಲ್) ಕಂಪನಿಯ ಮುಖ್ಯ ಕಚೇರಿ ಬೆಂಗಳೂರಿನಲ್ಲಿದೆ. ಅಲ್ಲದೇ ಜಗತ್ತಿನ ಎಲ್ಲಾ ಭಾಗಗಳಲ್ಲೂ ಕಚೇರಿಗಳನ್ನು ಹೊಂದಿದೆ. ವಿಶ್ವಾದ್ಯಂತ ಮೊಬೈಲ್ ಗ್ರಾಹಕರಿಗೆ ಪ್ರತಿದಿನ 575 ದಶಲಕ್ಷ ಮ್ಯೂಸಿಕ್ ಪ್ಲೇಗಳನ್ನು ಒದಗಿಸುತ್ತದೆ. ಸದ್ಯದ ನಿಯೋಜನೆ ಮೇಲೆ ಹೇಳುವುದಾದರೆ,  ವಿಶ್ವಾದ್ಯಂತ 1.5 ಶತಕೋಟಿ ಮೊಬೈಲ್ ಬಳಕೆದಾರರ ಅಚ್ಚುಮೆಚ್ಚಿನ ತಾಣ ಆನ್ಮೊಬೈಲ್. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ www.onmobile.com

ಅಕ್ರಮ ಖಾಸಗಿ ಶಾಲೆಗಳು ಹಾಗೂ ಆಸ್ಪತ್ರೆಗಳಿಗೆ ಬ್ರೇಕ್ - ನರಸಿಂಹಮೂರ್ತಿ

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಕ್ರಮ ಖಾಸಗಿ ಶಾಲೆಗಳು ಹಾಗೂ ಆಸ್ಪತ್ರೆಗಳು ತಲೆ ಎತ್ತಿದ್ದು, ಅವುಗಳಿಗೆ ಶೀಘ್ರದಲ್ಲೇ ನೊಟೀಸ್ ನೀಡಿ, ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಜಿ. ನರಸಿಂಹಮೂರ್ತಿ ತಿಳಿಸಿದರು ಎರಡನೇ ಬಾರಿಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಅಧಿಕಾರಿಗಳ ಸಭೆ ಕರೆದು ಅವರು ಮಾತನಾಡಿದರು. ನಗರದಲ್ಲಿ ಸಾಕಷ್ಟು ಅಕ್ರಮ ಶಾಲೆಗಳು ತಲೆ ಎತ್ತಿದ್ದು, ಇವುಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು, ಅಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳನ್ನು ಹಳ್ಳಿಗಳಿಗೆ ತಂದು ಬಿಡುವ ವಾಡಿಕೆ ಹುಟ್ಟಿಕೊಂಡಿದೆ, ಹಾಗಾಗಿ ಹಳ್ಳಿಗಳಲ್ಲಿ ಇರುವ ಆರೋಗ್ಯ ಕೇಂದ್ರಗಳು ಕಡ್ಡಾಯವಾಗಿ ಅದಕ್ಕೆ ಸಂಬಂಧಪಟ್ಟ  ಔಷಧಗಳನ್ನು ಇಟ್ಟುಕೊಳ್ಳಬೇಕೆಂದರು, ಅಲ್ಲದೆ ಸಾಕಷ್ಟು ಅಕ್ರಮ ಆಸ್ಪತ್ರೆಗಳು ಸಣ್ಣ ಪುಟ್ಟ ಕ್ಲಿನಿಕ್‌ಗಳು ಪ್ರಾರಂಭವಾಗಿದ್ದು, ಶೀಘ್ರದಲ್ಲಿ ಎಲ್ಲಾ ಕ್ಲಿನಿಕ್‌ಗಳ ಮಾಹಿತಿ ಪಡೆಯಬೇಕು, ಅದರ ಜೊತೆಗೆ ವೈದ್ಯಾಧಿಕಾರಿಗಳ ಶಿಕ್ಷಣದ ಬಗ್ಗೆಯೂ ಮಾಹಿತಿ ಪಡೆದು ಸೂಕ್ತ ವರದಿ ನೀಡಬೇಕೆಂದು ಅವರು ಅಧಿಕಾರಿಗಳಿಗೆ ಆದೇಶಿಸಿದರು.

ನಿವೃತ್ತ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಎನ್. ಕೃಷ್ಣಪ್ಪರವರ ಮಗಳ ಅದ್ದೂರಿ ನಿಶ್ಚಿತಾರ್ಥ

ಬೆಂಗಳೂರು: ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜೆಡಿಎಸ್ ಮುಖಂಡರು ಆದ ಎನ್. ಕೃಷ್ಣಪ್ಪರವರ ಪುತ್ರಿಯಾದ ಕೆ. ಸೌಂದರ್ಯರವರ ನಿಶ್ಚಿತಾರ್ಥ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಜರುಗಿತು, ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಪಡುವನಹಳ್ಳಿ ಗ್ರಾಮಸ್ಥರಾದ ರತ್ನಮ್ಮ ಮತ್ತು ವೆಂಕಟೇಶಪ್ಪರವರ ಮಗ (ಐಆರ್‌ಎಸ್ ಅಧಿಕಾರಿ) ಪಿ.ವಿ.ಬೈರಪ್ಪನ ಸೌಂದರ್ಯ ಅವರ ನಿಶ್ಚಿತಾರ್ಥ ನಡೆಯಿತು. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು, ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ದಂಪತಿಗಳು, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಸಂಸ್ಥಾಫಕ ರಾಜ್ಯಾಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ ಮತ್ತು ಅವರ ಬಳಗ ಜೊತೆಗೆ ಹಲವಾರು ರಾಜಕೀಯ ಮುಖಂಡರುಗಳು, ಸರ್ಕಾರಿ ಅಧಿಕಾರಿಗಳು ಪಾಲ್ಗೊಂಡಿದ್ದರು.

Screenshot_2018-09-22-17-27-54-40.png
IMG20180921214910.jpg

೨೧೦ ವರ್ಷಗಳ ಕಾಲ ಬದುಕಿರುವ ಅಪರೂಪದ ವ್ಯಕ್ತಿ!

೨೧೦ ವರ್ಷಗಳ ಕಾಲ ಬದುಕಿರುವ ಅಪರೂಪದ ವ್ಯಕ್ತಿ! ಮನುಷ್ಯ, ೧೦೦ ರಿಂದ ೧೧೦ ವರ್ಷದವರೆಗೆ ಬದುಕಿರುವ ಕೆಲವೊಂದು ಉದಾಹರಣೆಗಳನ್ನು ನಾವು ನೋಡಿದ್ದೇವೆ, ಆದರೆ ಇಲ್ಲೊಬ್ಬ ಸ್ವಾಮೀಜಿ ೨೧೦ ವರ್ಷಗಳ ಕಾಲ ಬದುಕಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ, ಸ್ವಾಮೀಜಿಯು ಗಂಗೋತ್ರಿಧಾಮದಲ್ಲಿರುವ ನಂದನ್ ಎಂಬ ಅರಣ್ಯದಲ್ಲಿ ಈ ಸ್ವಾಮೀಜಿಗಳು ಕೂತಿದ್ದಾರೆ ಎಂಬ ಮಾಹಿತಿ ಇದೆ. ಇವರು ಇನ್ನು ಬದುಕಿದ್ದಾರೆ ಎಂಬ ಸುದ್ದಿಯೇ ಒಂದು ವಿಸ್ಮಯ

ಮೋಹನಭಾಗವತ್ ಮೇಲೆ ಕಿಡಿ ಕಾರಿದ ರಾಹುಲ್ ಗಾಂಧಿ!

ನೀವೇನು ದೇವರಾ? ದೇಶವನ್ನು ಸಂಘಟಿಸುತ್ತೇನೆ ಎಂದು ಹೇಳುವುದಕ್ಕೆ?" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ(ಸರಸಂಘಚಾಲಕ್) ಮೋಹನ್ ಭಾಗವತ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.ಮತ್ತೆ ಮೋದಿ ವಿರುದ್ಧ ರಾಹುಲ್ ಗಾಂಧಿ ರಫೇಲ್ ಯುದ್ಧ "ಮೋಹನ್ ಭಾಗವತ್ ಅವರು ಒಮ್ಮೆ ಮಾತನಾಡುತ್ತಿದ್ದುದನ್ನು ನಾನು ಕೇಳಿದ್ದೇನೆ. ’ಈ ದೇಶವನ್ನು ಸಂಘಟಿಸಲು ನಾವು ಹೊರಟಿದ್ದೇವೆ’ ಎಂದು ಅವರು ಹೇಳುತ್ತಿದ್ದರು. ಈ ದೇಶವನ್ನು ಸಂಘಟಿಸಲು ನೀವ್ಯಾರು ಮಿ.ಮೋಹನ್ ಭಾಗವತ್ ಅವರೇ? ನೀವೇನು ದೇವರೇ? ದೇಶ ತನ್ನಷ್ಟಕ್ಕೆ ತಾನೇ ಸಂಘಟಿಸುತ್ತದೆ ಬಿಡಿ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.ಮತ್ತೆ ಮೋದಿ ವಿರುದ್ಧ ರಾಹುಲ್ ಗಾಂಧಿ ರಫೇಲ್ ಯುದ್ಧ "ಈ ದೇಶದ ಜನರು ಇದೀಗ ಒತ್ತಡ, ಆತಂಕದಲ್ಲಿ ಬದುಕುತ್ತಿದ್ದಾರೆ. ಅವರ ಮೇಲೆ ಒಂದು ಸಿದ್ಧಾಂತವನ್ನು ತುರುಕಲು ಪ್ರಯತ್ನಿಸಲಾಗುತ್ತಿದೆ. ಆದರೆ ನೂರು ಕೋಟಿ ಜನರಿರುವ ಒಂದು ದೇಶದಲ್ಲಿ ಒಂದೇ ಸಿದ್ಧಾಂತವನ್ನು ನಂಬಿ ಬದುಕುವುದು ಹೇಗೆ ಸಾಧ್ಯ?" ಎಂದು ಅವರು ಪ್ರಶ್ನಿಸಿದರು."ಭಾರತೀಯ ಶಿಕ್ಷಣ ಪದ್ಧತಿ ಸರಿಯಿಲ್ಲ ಎಂಬುದು ಅವರ(ಆರೆಸ್ಸೆಸ್) ವಾದ. ಆದರೆ ಪ್ರತಿಯೊಬ್ಬರೂ ತಮ್ಮ ಧ್ವನಿಯನ್ನು, ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುವ ಅವಕಾಶವನ್ನು ಈ ಶಿಕ್ಷಣ ನೀಡಬೇಕು" ಎಂದು ರಾಹುಲ್ ಗಾಂಧಿ ಹೇಳಿದರು.

ವಿಸ್ಮಯ ಮಾಧ್ಯಮ ಈಗ ವೆಬ್‌ಸೈಟ್‌ನಲ್ಲೂ ಲಭ್ಯವಾಗಲಿದೆ - ಜಾನಕಿಮೋಹನ್

ವಿಸ್ಮಯ ಮಾಧ್ಯಮ ಕನ್ನಡ ಮಾಸ ಪತ್ರಿಕೆಯು ಸತತವಾಗಿ ನಾಲ್ಕು ವರ್ಷಗಳಿಂದ ಉತ್ತಮವಾಗಿ ಕೆಲಸ ನಿರ್ವಹಿಸಿಕೊಂಡು ಬೆಂಗಳೂರು ನಗರ, ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ಹಾಗೂ ಇನ್ನೂ ಹಲವಾರು ಜಿಲ್ಲೆಗಳಲ್ಲಿ ಪತ್ರಿಕೆಯೂ ಉತ್ತಮವಾಗಿ ಮೂಡಿ ಬರುತ್ತಿದ್ದು, ನಮ್ಮ ಅಭಿವೃದ್ಧಿಯ ಇನ್ನೊಂದು ಹೆಜ್ಜೆಯಾಗಿ ಆನ್‌ಲೈನ್ ಮುಖಾಂತರ ಈಗ ಸುದ್ದಿಯನ್ನು ತಲುಪಿಸುವ ಒಂದು ಹೊಸ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದರು. ನೂತನವಾಗಿ ಪ್ರಾರಂಭವಾದ ವಿಸ್ಮಯ ಮಾಧ್ಯಮ ವೆಬ್‌ಸೈಟ್ ಪ್ರಾರಂಭದ ಹಂತದಲ್ಲಿ ವಿಸ್ಮಯ ಸುದ್ದಿ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ಈ ಹಿಂದೆ ಪತ್ರಿಕೆಗೆ ಯಾವ ರೀತಿ ಸಹಕಾರ ನೀಡುತ್ತಾ ಬಂದಿದ್ದೀರಿ, ಅದೇ ರೀತಿಯಲ್ಲಿ ನಮಗೆ ಮುಂದೆಯೂ ಕೂಡ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

Click to edit the title

Click to edit the title

VISMAYA MADYAMA

Bengaluru, Kamataka 562162, India

Operating hours

Monday - Friday: 11am - 9:30pm Sunday & Public Holiday: Closed